JobsNews

ಹೆಸ್ಕಾಂ ಪವರ್‌ಮ್ಯಾನ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರಿಂದ ಅರ್ಜಿ ಆಹ್ವಾನ Hescom Junior Powerman Nemakati 2024

WhatsApp Group Join Now
Telegram Group Join Now

Hescom Junior Powerman Nemakati 2024 : ಹೆಸ್ಕಾಂ (Hescom) ಅರ್ಥಾತ್ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ (Hubli Electricity Supply Company) ಕಿರಿಯ ಪವರ್‌ಮ್ಯಾನ್ (Junior Powerman) ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 560 ಹುದ್ದೆಗಳ ನೇಮಕಾತಿ ನಡೆಯಲಿದ್ದು, 10ನೇ ತರಗತಿ (SSLC)  ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹೆಸ್ಕಾಂ ಕಿರಿಯ ಪವರ್‌ಮ್ಯಾನ್ ನೇಮಕಾತಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಆದರೆ ಕೆಲವು ದೈಹಿಕ ಸಾಮರ್ಥ್ಯ ಪರೀಕ್ಷೆಗಳು ನಡೆಯಲಿದ್ದು; ಈ ಪರೀಕ್ಷೆಗಳಲ್ಲಿ ಪಾಸಾದವರಿಗೆ ನಿಶ್ಚಿತವಾಗಿಯೂ ಉದ್ಯೋಗ ಲಭ್ಯವಾಗಲಿದೆ.

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಕೆಪಿಟಿಸಿಎಲ್
  • ಉದ್ಯೋಗ ಸಂಸ್ಥೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ
  • ಒಟ್ಟು ಹುದ್ದೆಗಳು : 560
  • ಹುದ್ದೆಗಳ ಹೆಸರು : ಕಿರಿಯ ಪವರ್‌ಮ್ಯಾನ್
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ

ಮಾಸಿಕ ವೇತನದ ವಿವರ

ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಆರಂಭಿಕ ಮೂರು ವರ್ಷ ತಲಾ 17,000, 19,000 ಹಾಗೂ 21,000 ರೂಪಾಯಿಯಂತೆ ವೇತನ ಏರಿಕೆಯಾಗಿ ಕ್ರಮೇಣ 28,550 ರೂಪಾಯಿ ದಿಂದ 63,000 ರೂಪಾಯಿ ತನಕ ವೇತನ ಸಿಗಲಿದೆ. ಜೊತೆಗೆ ಸರ್ಕಾರದ ಸವಲತ್ತುಗಳು ಅನ್ವಯವಾಗಲಿವೆ.

ವಿದ್ಯಾರ್ಹತೆ ಮತ್ತು ಇತರ ಅರ್ಹತೆಗಳು

ಹೆಸ್ಕಾಂ ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಮುಖವಾಗಿ ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಸ್ಪಷ್ಟವಾದ ನೇತ್ರದೃಷ್ಟಿ ಮತ್ತು ನಿಗದಿಪಡಿಸಿದ ದೇಹದಾರ್ಡ್ಯತೆ ಹೊಂದಿರಬೇಕು.

ವಯೋಮಿತಿ ಕನಿಷ್ಠ 18 ವರ್ಷವಾಗಿದ್ದು; ಗರಿಷ್ಠ ವಯೋಮಿತಿಯು ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ಹಾಗೂ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

Hescom Junior Powerman Recruitment 2024

ಸಹನ ಶಕ್ತಿ ಪರೀಕ್ಷೆ

ಮೇಲ್ಕಾಣಿಸಿದ ಅರ್ಹತೆಗಳ ಜೊತೆಗೆ ಈ ಕೆಳಗಿನ ಯಾವುದಾದರೂ ಮೂರು ಸಹನ ಶಕ್ತಿ ಪರೀಕ್ಷೆಗಳಲ್ಲಿ ಪಾಸಾಗಬೇಕು. ವಿದ್ಯುತ್ ಕಂಬ (8 ಮೀಟರ್ ಎತ್ತರ) ಏರುವುದು ಕಡ್ಡಾಯವಾಗಿದ್ದು; ಅದರ ಜೊತೆಗೆ ಈ ಕೆಳಕಂಡ ಯಾವುದಾದರೂ ಎರಡು ಪರೀಕ್ಷೆಯಲ್ಲಿ ಪಾಸಾಗಬೇಕು:

  • 100 ಮೀಟರ್ ಓಟ : 14 ಸೆಕೆಂಡ್‌ಗಳು
  • ಸ್ಕಿಪ್ಪಿಂಗ್ : ಒಂದು ನಿಮಿಷಕ್ಕೆ 50 ಬಾರಿ
  • ಶಾಟ್‌ಫುಟ್ (12 ಪೌಂಡ್) : 8 ಮೀಟರ್ ಎಸೆತ
  • 800 ಮೀಟರ್ ಓಟ : 3 ನಿಮಿಷಗಳು

ಅರ್ಜಿ ಶುಲ್ಕ ವಿವರ

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 614
  • ಒಬಿಸಿ ಅಭ್ಯರ್ಥಿಗಳಿಗೆ ರೂ. 614
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 378
  • ವಿಶೇಷ ಚೇತನ (ಶ್ರವಣ ದೋಷ ಮಾತ್ರ) ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭಿಕ ದಿನಾಂಕ :
    21-10-2024
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ :
    20-11-2024

ಅರ್ಜಿ ಸಲ್ಲಿಕೆ ಲಿಂಕ್ : Apply Now

WhatsApp Group Join Now
Telegram Group Join Now

Related Posts

error: Content is protected !!