JobsNews

ರಾಷ್ಟ್ರೀಕೃತ ಬ್ಯಾಂಕುಗಳ 5,351 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ IBPS Recruitment 2024

WhatsApp Group Join Now
Telegram Group Join Now

IBPS Recruitment 2024 : ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಆಯೋಗವು (Institute of Banking Personnel Selection -IBPS) ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (Nationalized Banks) ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಸೇರಿದಂತೆ ಒಟ್ಟು 11 ರಾಷ್ಟ್ರೀಕೃತ ಬ್ಯಾಂಕುಗಳಿಗೆ ಈ ನೇಮಕ ನಡೆಯಲಿದೆ.

ಹುದ್ದೆಗಳ ವಿವರ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು 2024-25ನೇ ಸಾಲಿಗೆ ಪ್ರೊಬೆಷನರಿ ಆಫೀಸರ್ /ಮ್ಯಾನೇಜ್‌ಮೆಂಟ್ ಟ್ರೇನಿ ಮತ್ತು ಸ್ಪೆಷಲಿಸ್ಟ್ ಆಫೀಸರ್‌ಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಪ್ರೊಬೆಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನಿ : 4,455 ಹುದ್ದೆಗಳು
  • ಸ್ಪೆಷಲಿಸ್ಟ್ ಆಫೀಸರ್ : 896 ಹುದ್ದೆಗಳು
  • ಒಟ್ಟು ಹುದ್ದೆಗಳು : 5,351
ಯಾವೆಲ್ಲ ಬ್ಯಾಂಕುಗಳಿಗೆ ನೇಮಕಾತಿ ನಡೆಯಲಿದೆ?
  • ಬ್ಯಾಂಕ್ ಆಫ್ ಬರೋಡಾ
  • ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಕೆನರಾ ಬ್ಯಾಂಕ್
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಇಂಡಿಯನ್ ಬ್ಯಾಂಕ್
  • ಇಂಡಿಯನ್ ಒವರ್ ಸೀಸ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಪಂಜಾಬ್ ಮತ್ತು ಸಿಂಥ್ ಬ್ಯಾಂಕ್
  • ಯುಕೋ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಶುಲ್ಕ ವಿವರ
  • ವಿದ್ಯಾರ್ಹತೆ ಯಾವುದೇ ಪದವಿ ಪಡೆದಿದ್ದು, ಅರ್ಜಿ ಸಲ್ಲಿಕೆ ದಿನದಂದು ಅಂಕಪಟ್ಟಿಯಲ್ಲಿರುವ ಅಂಕಗಳ ವಿವರಗಳನ್ನು ದಾಖಲಿಸಬೇಕು. (ವಿವರವಾದ ವಿದ್ಯಾರ್ಹತೆ ತಿಳಿಯಲು ಅಧಿಸೂಚನೆ ಗಮನಸಿ)
  • ವಯೋಮಿತಿ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ  ನಿಗದಿಪಡಿಸಲಾಗಿದ್ದು; ವಿವಿಧ ಮೀಸಲಾತಿಯನ್ವಯ 3ರಿಂದ 10 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆ ಇದೆ.
  • ಇನ್ನು ಅರ್ಜಿ ಶುಲ್ಕವಾಗಿ ಅಂಗವಿಕಲರು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 175 ರೂಪಾಯಿ ಹಾಗೂ ಉಳಿದವರಿಗೆ 850 ರೂಪಾಯಿ ನಿಗದಿ ಮಾಡಲಾಗಿದೆ.
ಕ್ರೆಡಿಟ್ ಹಿಸ್ಟರಿ ಅಗತ್ಯವಾಗಲಿದೆ

ಬ್ಯಾಂಕಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕ್ರೆಡಿಟ್ ಹಿಸ್ಟರಿ ತುಂಬಾ ಮುಖ್ಯವಾಗಿರುತ್ತದೆ. ನೇಮಕಾತಿ ಸಮಯದಲ್ಲಿ ಆಯಾ ಬ್ಯಾಂಕ್‌ಗಳು ನಿಗದಿಪಡಿಸುವ ಕ್ರೆಡಿಟ್ ಅಂಕಗಳನ್ನು ಹೊಂದಿರಬೇಕಾಗುತ್ತದೆ. ಹುದ್ದೆಗೆ ಭರ್ತಿಯಾಗುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಹಿಸ್ಟರಿ ಅಪ್‌ಡೇಟ್ ಆಗಿರಬೇಕು. ಇಲ್ಲದಿದ್ದಲ್ಲಿ ಸಾಲಗಾರರಿಂದ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆ ಹೇಗೆ?

ಒಂದು ತಾಸಿನ ಕಾಲಾವಧಿಯ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಆನಂತರ ಸಂದರ್ಶನ ನಡೆಸಲಿದ್ದು; ಒಟ್ಟು ಮೂರು ಹಂತದ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಇದಕ್ಕೆ ನೂರು ಅಂಕಗಳಿದ್ದು, ಶೇ.40 ಅರ್ಹತಾದಾಯಕವಾಗಿವೆ. ಜತೆಗೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳನ್ನು 80:20 ಅನುಪಾತದಲ್ಲಿ ಪರಿಗಣಿಸಿ ಆಯ್ಕೆಪಟ್ಟಿಯನ್ನು ರಚಿಸಲಾಗುತ್ತದೆ.

ರಾಜ್ಯದಲ್ಲಿ  ಪರೀಕ್ಷೆ ನಡೆಯುವ ಸ್ಥಳ

ರಾಜ್ಯದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ಕೇಂದ್ರಗಳು ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿರಲಿವೆ.

ಮುಖ್ಯ ಪರೀಕ್ಷೆಯನ್ನು ರಾಜ್ಯದ ಬೆಂಗಳೂರು, ಧಾರವಾಡ, ಕಲಬುರಗಿ ಹುಬ್ಬಳ್ಳಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಸಲಾಗುತ್ತದೆ (ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಕಲಬುರಗಿ ಹೊರತುಪಡಿಸಿ ಉಳಿದೆಲ್ಲಾ ಕೇಂದ್ರಗಳು ಇರಲಿವೆ)

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
    21-08-2024
  • ಪೂರ್ವಭಾವಿ ಪರೀಕ್ಷೆ ದಿನಾಂಕ:
    ಅಕ್ಟೋಬರ್ / ನವೆಂಬರ್, 2024
  • ಮುಖ್ಯ ಪರೀಕ್ಷೆ ದಿನಾಂಕ:
    ನವೆ೦ಬರ್ / ಡಿಸೆಂಬರ್, 2024
  • ಸಂದರ್ಶನದ ದಿನಾಂಕ:
    ಜನವರಿ / ಮಾರ್ಚ್, 2025
  • ನೇಮಕಾತಿಗೆ ಶಿಫಾರಸು ದಿನಾಂಕ:
    ಏಪ್ರಿಲ್, 2025
ಅರ್ಜಿ ಲಿಂಕ್ : Apply Now
ಅಧಿಸೂಚನೆ : Download
WhatsApp Group Join Now
Telegram Group Join Now

Related Posts

error: Content is protected !!