JobsNews

10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ನಿಮ್ಮೂರಲ್ಲೇ ಉದ್ಯೋಗ Karnataka Postal Circle Recruitment

WhatsApp Group Join Now
Telegram Group Join Now

Karnataka Postal Circle Recruitment : 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಗ್ರಾಮೀಣ ಅಂಚೆ ಸೇವಕರಾಗಲು ಭಾರತೀಯ ಅಂಚೆ ಇಲಾಖೆಯು (IndiaPost) ಅವಕಾಶ ನೀಡಿದೆ. ಈ ಸಂಬ೦ಧ ಭಾರತದ ಎಲ್ಲಾ ರಾಜ್ಯಗಳಲ್ಲೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು; ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ನಿಮ್ಮೂರಲ್ಲೇ ಪೋಸ್ಟಾಫೀಸ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಇದು ಅಂಚೆ ಇಲಾಖೆಯ ವಿಭಿನ್ನ ಉದ್ಯೋಗ ಅವಕಾಶವಾಗಿದ್ದು; ಇಲ್ಲಿ, ನೀವು ವಾಸವಿರುವ ಊರಿನಲ್ಲಿಯೇ ಅಂಚೆ ಕಚೇರಿ ತೆರೆದು, ಆ ಮೂಲಕ ಅಂಚೆ ಇಲಾಖೆಯ ವಹಿವಾಟು ನಡೆಸಬಹುದು. ನಿಮ್ಮಲ್ಲಿ ಅಂಚೆ ಕಚೇರಿ ನಡೆಸಲು ಬೇಕಾಗುವ ಸ್ಥಳಾವಕಾಶವಿದ್ದು; 10ನೇ ತರಗತಿ ಪಾಸಾಗಿದ್ದರೆ ಸಾಕು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳು ಇವಾಗಿದ್ದು, ನೀವು ನೀಡುವ ಸೇವೆಗೆ ಪ್ರತಿಯಾಗಿ ಅಂಚೆ ಇಲಾಖೆಯು ಸಂಭಾವನೆ ಹಾಗೂ ಇತರ ಭತ್ಯೆಗಳನ್ನು ನೀಡುತ್ತದೆ. ಜೊತೆಗೆ, ಈ ಸೇವೆಯಲ್ಲಿರುವ ಅಭ್ಯರ್ಥಿಗಳಿಗಾಗಿಯೇ ಇಲಾಖಾ ಪರೀಕ್ಷೆಗಳನ್ನು ಎದುರಿಸಿ, ಸರ್ಕಾರಿ ಉದ್ಯೋಗಿಯಾಗುವ ಅವಕಾಶವೂ ಇದೆ.

ಆಯ್ಕೆ ಪ್ರಕ್ರಿಯೆ ಹೇಗೆ?

10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ನಂತರ ದಾಖಲಾತಿಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಾಗುತ್ತದೆ. ದಾಖಲಾತಿಗಳನ್ನು ಸಂಬ೦ಧಿಸಿದ ಪ್ರಾಧಿಕಾರ ಪರಿಶೀಲನೆ ನಡೆಸಿದ ಬಳಿಕ ಅಂಚೆ ಇಲಾಖೆಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸಿ ಅಂತಿಮಗೊಳಿಸುತ್ತಾರೆ.

ಕಚೇರಿಯ ಕಾರ್ಯ ನಿರ್ವಹಣೆಗೆ ಸ್ಥಳಾವಕಾಶವನ್ನು ಒದಗಿಸುವುದು ಮುಖ್ಯ ಪ್ರಕ್ರಿಯೆಯಾಗಿರುತ್ತದೆ. ಇದಕ್ಕಾಗಿ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಸ್ಥಳಾವಕಾಶ ಒದಗಿಸುವುದು ಸಾಧ್ಯವಾಗದಿದ್ದಲ್ಲಿ ನಂತರದ ಅಭ್ಯರ್ಥಿಗೆ ಅವಕಾಶ ನೀಡಲಾಗುತ್ತದೆ.

ಕೆಲಸ ನಿರ್ವಹಣೆ ಹೇಗೆ?

ಸಾರ್ವಜನಿಕರಿಗೆ ಅಂಚೆ ಇಲಾಖೆಯ ಸೇವೆಗಳನ್ನು ಒದಗಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಅಂದರೆ ಅಂಚೆ ಇಲಾಖೆಯ ಅಂಚೆ ಚೀಟಿ ಹಾಗೂ ಇತರ ಉತ್ಪನ್ನಗಳ ಮಾರಾಟ, ಅಂಚೆ ಕಚೇರಿಯ ಮೇಲಾಧಿಕಾರಿಗಳು ಸೂಚಿಸುವ ಇನ್ನಿತರೆ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.

ನಿಮ್ಮದೇ ಸ್ಥಳದಲ್ಲಿ ನೀವೇ ತೆರೆದ ಅಂಚೆ ಉಪಕಚೇರಿಗೆ ನೀವು ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಲಿದ್ದೀರಿ. ನಿಮಗೆ ಸಹಾಯಕರಾಗಿ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಇರುತ್ತಾರೆ. ಅಥವಾ ಅವರ ಕೆಲಸಗಳನ್ನು ನೀವೇ ನಿರ್ವಹಿಸಬಹುದು.

ಅರ್ಹತೆಗಳು ಏನಿರಬೇಕು?

ಕನ್ನಡ ಭಾಷೆಯಲ್ಲಿ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಸೈಕಲ್ ಸವಾರಿ ತಿಳಿದಿರಬೇಕು ಹಾಗೂ ಜೀವನೋಪಾಯಕ್ಕಾಗಿ ಇತರ ಮೂಲಗಳಿರಬೇಕು.

ಸ್ವಂತ ಸ್ಥಳಾವಕಾಶ ಹೊಂದಿರುವ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೀಸಲಾತಿಯನ್ವಯ ವಯೋ ಸಡಿಲಿಕೆ ಕೂಡ ಇರಲಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು?

ಭಾರತದಾದ್ಯಂತ ಒಟ್ಟು 44,248 ಹುದ್ದೆಗಳಿಗೆ ಅವಕಾಶ ನೀಡಲಾಗಿದ್ದು; ಕರ್ನಾಟಕಕ್ಕೆ 1,940 ಹುದ್ದೆಗಳಿಗೆ ಅವಕಾಶವಿದೆ. ಕರ್ನಾಟಕದ ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಬಾಗಲಕೋಟೆ : 23
  • ಬಳ್ಳಾರಿ : 50
  • ಬೆಂಗಳೂರು ಜಿಪಿಒ : 04
  • ಬೆಳಗಾವಿ : 33
  • ಬೆಂಗಳೂರು ಪೂರ್ವ : 83
  • ಬೆಂಗಳೂರು ದಕ್ಷಿಣ : 62
  • ಬೆಂಗಳೂರು ಪಶ್ಚಿಮ : 39
  • ಬೀದರ್ : 59
  • ಚನ್ನಪಟ್ಟಣ : 87
  • ಚಿಕ್ಕಮಗಳೂರು : 60
  • ಚಿಕ್ಕೋಡಿ : 19
  • ಚಿತ್ರದುರ್ಗ : 27
  • ದಾವಣಗೆರೆ : 40
  • ಧಾರವಾಡ : 22
  • ಗದಗ : 18
  • ಗೋಕಾಕ್ : 07
  • ಹಾಸನ : 78
  • ಹಾವೇರಿ : 44
  • ಕಲಬುರಗಿ : 83
  • ಕಾರವಾರ : 43
  • ಕೊಡಗು : 76
  • ಕೋಲಾರ : 106
  • ಕೊಪ್ಪಳ : 36
  • ಮಂಡ್ಯ : 65
  • ಮಂಗಳೂರು : 62
  • ಮೈಸೂರು : 42
  • ನಂಜನಗೂಡು : 66
  • ಪುತ್ತೂರು : 89
  • ರಾಯಚೂರು : 63
  • ಆರ್‌ಎಂಎಸ್ -ಎಚ್‌ಬಿ : 03
  • ಆರ್‌ಎಂಎಸ್ ಕ್ಯೂ : 09
  • ಶಿವಮೊಗ್ಗ : 89
  • ಶಿರಸಿ : 66
  • ತುಮಕೂರು : 107
  • ಉಡುಪಿ : 90
  • ವಿಜಯಪುರ : 40
  • ಯಾದಗಿರಿ : 50
ಸಂಭಾವನೆ ಹಾಗೂ ಭತ್ಯೆ

ಮಾಸಿಕ ಭತ್ಯೆ ಅಥವಾ ಸಂಭಾವನೆಯಾಗಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಕರ್ತವ್ಯಕ್ಕೆ 12,000 ರಿಂದ 29,380 ರೂಪಾಯಿ ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಗ್ರಾಮೀಣ್ ಡಾಕ್ ಸೇವಕ್ ಕರ್ತವ್ಯಕ್ಕೆ 10,000 ದಿಂದ 24,470 ರೂಪಾಯಿ ವೇತನ ಸಿಗಲಿದೆ.

ನಿಯಮಾನುಸಾರ ಕಾರ್ಯ ನಿರ್ವಹಣೆ ಆಧರಿಸಿ ಸಂಭಾವನೆ, ವಾರ್ಷಿಕ ಶೇ.3 ವೇತನ ಹೆಚ್ಚಳ ಅನ್ವಯವಾಗಲಿದೆ. ಜಿಡಿಎಸ್ ಗ್ರಾಚ್ಯುಟಿ, ಸರ್ವಿಸ್ ಡಿಸ್ಟಾರ್ಜ್ ಯೋಜನೆಯಂತೆ ಇತರ ಸೌಲಭ್ಯ ನೀಡಲಾಗುತ್ತದೆ. ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ಆಗಸ್ಟ್ 05, 2024
ಅರ್ಜಿ ತಿದ್ದುಪಡಿ ಕೊನೆಯ ದಿನಾಂಕ:
ಆಗಸ್ಟ್ 06-08, 2024

  • ಅಧಿಸೂಚನೆ: Download
  • ನೋಂದಣಿ ಹಾಗೂ ಅರ್ಜಿ ಸಲ್ಲಿಕೆ ಲಿಂಕ್:  Apply Now
WhatsApp Group Join Now
Telegram Group Join Now

Related Posts

error: Content is protected !!