SC/ ST ಫಲಾನುಭವಿಗಳ ಭರ್ಜರಿ ಸಬ್ಸಿಡಿ ಯೋಜನೆಗಳು : ಸ್ವಯಂ ಉದ್ಯೋಗ, ಭೂಮಿ ಖರೀದಿ, ಸ್ವಾವಲಂಬಿ ಸಾರಥಿ, ಗಂಗಾಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನ Karnataka SC ST Subsidy Schemes 2024

WhatsApp
Telegram
Facebook
Twitter
LinkedIn

Karnataka SC ST Subsidy Schemes 2024 : ಸಮಾಜ ಕಲ್ಯಾಣ ಇಲಾಖೆಯಿಂದ (Department of social welfare karnataka) ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ವಿವಿಧ ನಿಗಮಗಳ ಮೂಲಕ ಜಾರಿಗೊಳಿಸಲಾಗಿರುವ ಈ ಯೋಜನೆಗಳ ಅಡಿಯಲ್ಲಿ ಜನಾಂಗದ ಅಭಿವೃದ್ಧಿಗಾಗಿ ಸಹಾಯಧನ, ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ ವರ್ಷವೂ ಈ ಯೋಜನೆಗಳ ಪ್ರಯೋಜನ ಪಡೆಯಲು ಸರಕಾರ ಅರ್ಹ ಫಲನುಭವಿಗಳಿಂದ ಅರ್ಜಿ ಆಹ್ವಾನಿಸುತ್ತದೆ. ಆ ಪ್ರಕಾರ 2024-2025ನೇ ಸಾಲಿನಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಯಾವೆಲ್ಲ ಯೋಜನೆಗಳು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಸರಕಾರ ಹಲವು ಕಲ್ಯಾಣ ಯೋಜನೆಗಳನ್ನು ಕೈಗೊಂಡಿದ್ದು; ಪ್ರಸಕ್ತ 2024-2025ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  • ಸ್ವಯಂ ಉದ್ಯೋಗ ನೇರಸಾಲ ಯೋಜನೆ
  • ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ)
  • ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ
  • ಭೂ ಒಡೆತನ ಯೋಜನೆ
  • ಗಂಗಾ ಕಲ್ಯಾಣ ಯೋಜನೆ
ಸ್ವಯಂ ಉದ್ಯೋಗ ನೇರಸಾಲ ಯೋಜನೆ

ಹಣ್ಣು ಹಂಪಲು, ಮೀನು, ಮಾಂಸ, ಕುರಿ, ಹಂದಿ, ಮೊಲ, ಹಸು ಸಾಕಾಣಿಕೆ, ಮಳಿಗೆ / ತಳ್ಳುಗಾಡಿ ದುಡಿಮೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ. 1.00/-ಗಳ ಗರಿಷ್ಟ ಸಹಾಯ ಧನ ರೂ. 50,00/- ಸಾಲ ರೂ. 50,00/- ಸೌಲಭ್ಯವನ್ನು ನಿಗಮದಿಂದ ಮಾಡಲಾಗುವುದು. ನೇರವಾಗಿ ಮಂಜೂರಾತಿ ಮಾಡಲಾಗುವುದು. ಸದರಿ ಯೋಜನೆಯಲ್ಲಿ ಪಡೆದ ಸಾಲವನ್ನು ಫಲಾನುಭವಿ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಮರುಪಾವತಿಸಬೇಕು.

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ)

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕವನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲದ ವ್ಯವಸ್ಥೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ 2 ಹಂತದಲ್ಲಿ ಘಟಕ ವೆಚ್ಚವನ್ನು ಆಧಾರಿಸಿ ಸಹಾಯಧನವನ್ನು ಈ ಕೆಳಕಂಡ೦ತೆ ನಿಗಧಿ ಪಡಿಸಲಾಗಿದೆ.

  • ಎಸ್‌ಸಿ / ಎಸ್‌ಟಿ ಜನಾಂಗದ ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು, ಆದಾಯಗಳಿಸಲು ಘಟಕ ವೆಚ್ಚಕ್ಕೆ ಬ್ಯಾಂಕಿನಿ೦ದ ಮಂಜೂರಾದ ಸಾಲದ ಶೇ.70ರಷ್ಟು ಅಥವಾ ಗರಿಷ್ಠ ರೂ. 2.00 ಲಕ್ಷದ ವರೆಗೆ ಸಹಾಯ ಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
  • ಘಟಕ ವೆಚ್ಚದ ಶೇ.70% ರಷ್ಟು ಅಥವಾ ಗರಿಷ್ಠ ರೂ. 1.00 ಲಕ್ಷಗಳನ್ನು ನಿಗಮದಿಂದ ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
  • ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ಸರಕು ವಾಹನ/ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ ಗರಿಷ್ಟ ರೂ. 4.00 ಲಕ್ಷ ಸಹಾಯಧನ ನಿಗಮದಿಂದ ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ

ಎಸ್‌ಸಿ/ ಎಸ್‌ಟಿ ಸಮುದಾಯಗಳ ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ 10 ಸಂಖ್ಯೆಯ ಸದಸ್ಯರಿರುವ ನೋಂದಾಯಿತ ಮಹಿಳಾ ಸ್ವಸಹಾಯ ಸಂಘಗಳಿಗೆ ರೂ. 2.50 ಲಕ್ಷಗಳ (ಪ್ರತಿ ಸದಸ್ಯರಿಗೆ ರೂ. 15,000/-ಗಳ ಸಹಾಯ ಧನ ಮತ್ತು ರೂ. 10,000/-ಗಳ ಬೀಜ ಧನ) ಸೌಲಭ್ಯವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಇದರಲ್ಲಿ ರೂ. 1.50 ಲಕ್ಷಗಳ ಸಹಾಯಧನವಾಗಿದ್ದು; ಉಳಿಕೆ ರೂ. 1.00 ಲಕ್ಷ (ಶೇಕಡ 4ರಷ್ಟು ಬಡ್ಡಿದರ) ಸಾಲವಾಗಿರುತ್ತದೆ.

ಭೂ ಒಡೆತನ ಯೋಜನೆ

ಎಸ್‌ಸಿ/ ಎಸ್‌ಟಿ ಸಮುದಾಯಗಳ ಭೂರಹಿತ ಮಹಿಳಾ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಕೃಷಿ ಜಮೀನನ್ನು ನಿಗಮದಿಂದ ಖರೀದಿಸಿ ನೊಂದಣಿ ಮಾಡಿಸಿಕೊಡಲಾಗುವುದು. ಘಟಕ ವೆಚ್ಚದ ರೂ. 25,00 / 20.00 ಲಕ್ಷಗಳಲ್ಲಿ ಶೇ. 50% ಸಹಾಯ ಧನ ಹಾಗೂ ಉಳಿಕೆ ಹಣ ಸಾಲವಾಗಿರುತ್ತದೆ. ಅವಧಿ ಸಾಲವನ್ನು ವಾರ್ಷಿಕ 6ರ ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಮರು ಪಾವತಿಸಲಾಗುವುದು.

ಗಂಗಾ ಕಲ್ಯಾಣ ಯೋಜನೆ

1.20 ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿ ಕೊಡಲಾಗುವುದು. ಘಟಕ ವೆಚ್ಚ: ರೂ. 4.75 ಲಕ್ಷ / ರೂ. 3.75 ಲಕ್ಷ ಆಗಿದ್ದು; ಇದರಲ್ಲಿ ರೂ. 50,000/- ಸಾಲವೂ ಸೇರಿರುತ್ತದೆ.

ಯಾವೆಲ್ಲ ನಿಗಮಗಳಿಂದ ಅರ್ಜಿ ಆಹ್ವಾನ?

2023-2024ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ವಿವಿಧ ಎಸ್‌ಸಿ/ ಎಸ್ಟಿ ಜನಾಂಗದ ಕಲ್ಯಾಣ ಯೋಜನೆಗಳನ್ನು ಈ ಕೆಳಕಂಡ ನಿಗಮಗಳ ಮೂಲಕ ಅನುಷ್ಟಾನಗೊಳಿಸಲಾಗಿದೆ.

  1. ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  2. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  3. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  4. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
  5. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  6. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲ್ಕಾಣಿಸಿದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಿವಿಧ ಎಸ್‌ಸಿ / ಎಸ್ಟಿ ಸಮುದಾಯದ ಫಲಾನುಭವಿಗಳು ಕಲ್ಯಾಣ ಯೋಜನೆ ಸೌಲಭ್ಯ ಪಡೆಯಲು 10-10-2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಷ್ಟರೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ 2024-25ನೇ ಸಾಲಿನ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ / ಎಸ್.ಟಿ ಸಹಾಯವಾಣಿ 9482-300-400 ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.

Samagra Krushi   About Us
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon