ಕರ್ನಾಟಕ ಕೃಷಿ ಇಲಾಖೆ 945 ಹುದ್ದೆಗಳಿಗೆ ಅರ್ಜಿ ಆಹ್ವಾನ | ₹40,900 ರಿಂದ ₹83,900 ವೇತನ KSDA AO AAO Recruitment 2024 KPSC

WhatsApp
Telegram
Facebook
Twitter
LinkedIn

KSDA AO AAO Recruitment 2024 KPSC : ಕೊನೆಗೂ ಕೃಷಿ ಇಲಾಖೆಯಲ್ಲಿ (Department of Agriculture -KSDA) ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಗೆ ಚಾಲನೆ ಸಿಕ್ಕಿದೆ. ಹಲವು ದಿನಗಳಿಂದ ಕೃಷಿ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿ ಆರಂಭಿಸುವುದಾಗಿ ಹೇಳಿಕೊಂಡು ಬಂದಿದ್ದ ಸರ್ಕಾರ, ಇದೀಗ ಒಟ್ಟು 945 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಗ್ರೂಪ್ ‘ಬಿ’ ವೃಂದದ ಈ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission – KPSC) ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ವಿವರ
  • ಕೃಷಿ ಅಧಿಕಾರಿಗಳು : 128 (42 ಹೈಕ) ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿಗಳು : 817 (231 ಹೈಕ) ಹುದ್ದೆಗಳು
  • ಒಟ್ಟು ಹುದ್ದೆಗಳು : 945
ವಯೋಮಿತಿ ವಿವರ

ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು (Agriculture Officer – AO) ಹಾಗೂ ಸಹಾಯಕ ಕೃಷಿ ಅಧಿಕಾರಿಗಳು (Assistant Agriculture Officer – AAO) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 38, ಹಿಂದುಳಿದ ವರ್ಗದವರಿಗೆ 41 ಹಾಗೂ ಪ್ರವರ್ಗ-1 ಹಾಗೂ ಪರಿಶಿಷ್ಟರಿಗೆ ಗರಿಷ್ಠ ವಯೋಮಿತಿ 43 ವರ್ಷ ಎಂದು ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕದ ವಿವರ
  • ಸಾಮಾನ್ಯ ವರ್ಗದವರಿಗೆ 600 ರೂ.,
  • ಹಿಂದುಳಿದ ವರ್ಗಗಳಿಗೆ 300 ರೂ.,
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.,
  • ಪರಿಶಿಷ್ಟ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕದಿಂದ ವಿನಾಯ್ತಿ
ವಿದ್ಯಾರ್ಹತೆ ವಿವರ

ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ.85 ಹುದ್ದೆಗಳಿಗೆ ಬಿಎಸ್‌ಸಿ (ಕೃಷಿ) ಅಥವಾ ಬಿಎಸ್‌ಸಿ (ಆನರ್ಸ್) ಕೃಷಿ ಪದವಿ ಪಡೆದಿರಬೇಕು. ಇನ್ನುಳಿದ ಶೇ.15 ಹುದ್ದೆಗಳಿಗೆ ಬಿ.ಟೆಕ್ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅಗ್ರಕಲ್ಚರಲ್ ಇಂಜಿನಿಯರ್ ಪದವಿ ಪಡೆದಿರಬೇಕು. ಇಲ್ಲವೇ, ಕೃಷಿ ಮಾರುಕಟ್ಟೆ ಸಹಕಾರ, ಕೃಷಿ ಮಾರಾಟ ಮತ್ತು ಸಹಕಾರ, ಅಗ್ರಿ ಬಿಜಿನೆಸ್ ಮ್ಯಾನೇಜ್ ಮೆಂಟ್, ಕೃಷಿ ಜೈವಿಕ ತಂತ್ರಜ್ಞಾನ, ಅಗ್ರಿಕಲ್ಬರಲ್ ಇಂಜಿನಿಯರಿ೦ಗ್‌ನಲ್ಲಿ ಬಿಎಸ್‌ಸಿ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು.

ವೇತನ ಶ್ರೇಣಿ ವಿವರ

ಕೃಷಿ ಅಧಿಕಾರಿಗಳಿಗೆ 43,100 ರಿಂದ 83,900 ರೂಪಾಯಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳಿಗೆ 40,900 ರಿಂದ 78,200 ರೂಪಾಯಿ ವರೆಗೂ ಮಾಸಿಕ ವೇತನ ಇರಲಿದೆ. ಜೊತೆಗೆ ಸರ್ಕಾರದ ಎಲ್ಲಾ ಸವಲತ್ತುಗಳು ಅನ್ವಯವಾಗಲಿವೆ.

ನೇಮಕ ಹಾಗೂ ಪರೀಕ್ಷೆ ಪ್ರಕ್ರಿಯೆ ಹೇಗಿರಲಿದೆ?

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು, 150 ಅಂಕಗಳಿಗೆ 50 ಅಂಕಗಳನ್ನು ಅರ್ಹತಾದಾಯಕವಾಗಿ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 600 ಅಂಕಗಳಿಗೆ ನಡೆಸಲಾಗುತ್ತದೆ.

ಸಾಮಾನ್ಯ ಪತ್ರಿಕೆಗೆ 300 ಅಂಕಗಳಿದ್ದು, ಒಂದೂವರೆ ಗಂಟೆ ಹಾಗೂ 300 ಅಂಕಗಳ ನಿರ್ದಿಷ್ಟ ಪತ್ರಿಕೆಗೆ 2 ಗಂಟೆ ಕಾಲಾವಧಿ ಇರಲಿದೆ. ತಪ್ಪು ಉತ್ತರಗಳಿಗೆ ಶೇ.25 ಅಂಕಗಳನ್ನು ಕಳೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಒಟ್ಟು ಅಂಕಗಳಲ್ಲಿ ಶೇ.35 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಪರೀಕ್ಷೆಗೆ ಪರಿಗಣಿಸಲಾಗುವ ಪಠ್ಯಕ್ರಮವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಸಲ್ಲಿಕೆ ಕುರಿತ ಪ್ರಮುಖ ಮಾಹಿತಿ

ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಜನ್ಮದಿನ, ವಿಳಾಸ, ಮೀಸಲಾತಿ, ವಿದ್ಯಾರ್ಹತೆ ಮೊದಲಾದ ವಿವರಗಳ ಬದಲಾವಣೆ ಮಾಡಲು ಅವಕಾಶ ನೀಡುವುದಿಲ್ಲ. ಅರ್ಜಿ ಸಲ್ಲಿಕೆ ಕೊನೆಯ ದಿನದ ಒಳಗಾಗಿ ಹಳೆಯ ಅರ್ಜಿ ಡಿಲೀಟ್ ಮಾಡಿ ಹೊಸದಾಗಿ ಸಲ್ಲಿಸಬಹುದು. ಆದರೆ ಹಳೆಯ ಅರ್ಜಿಗೆ ಸಲ್ಲಿಸಿದ್ದ ಶುಲ್ಕ ಮರಳಿಸಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    07-10-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    07-11-2024

ಅಧಿಸೂಚನೆ : Download

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon