Cow and Buffalo shed Mgnrega subsidy : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೈನುಗಾರಿಕೆ (Dairy farming) ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಹಾಲಿನ ಪ್ರೋತ್ಸಾಹಧನ, ಉಚಿತ ಮೇವಿನ ಬೀಜದ ಕಿಟ್, ಜಾನುವಾರು ಲಸಿಕೆಯಂತಹ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಹಸು, ಎಮ್ಮೆ ಖರೀದಿಗೆ ಸಬ್ಸಿಡಿ (Subsidy for purchase of cow, buffalo), ಸಾಲ (Loan) ಹಾಗೂ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಒದಗಿಸುವ ಯೋಜನೆಗಳು ಕೂಡ ಹಲವಾರಿವೆ.
ಈ ಪೈಕಿ ದನದ ಕೊಟ್ಟಿಗೆ ಅಥವಾ ಜಾನುವಾರು ಶೆಡ್ ನಿರ್ಮಾಣಕ್ಕೆ ಸರ್ಕಾರ ಸಹಾಯಧನ ನೀಡಲಾಗುತ್ತದೆ. ನಿಮ್ಮೂರಿನ ಗ್ರಾಮ ಪಂಚಾಯತಿಯಲ್ಲಿಯೇ (Gram Panchayat) ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ (Mahatma Gandhi Rashtriya Rural Employment Guarantee Scheme) ಜಾನುವಾರು ಶೆಡ್ ನಿರ್ಮಾಣಕ್ಕೆ ಸಹಾಯಧನ ಸಿಗಲಿದೆ.
5 ಲಕ್ಷ ರೂಪಾಯಿ ವರಗೆ ಸಹಾಯಧನ
ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ (Mgnrega karnataka) ಮೂಲಕ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಂದು ಕುಟುಂಬವು ಜೀವಿತಾವಧಿಯಲ್ಲಿ ಭರ್ತಿ 5 ಲಕ್ಷ ರೂಪಾಯಿ ವರಗೆ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಸಹಾಯಧನ ಪಡೆಯಬಹುದಾಗಿದೆ.
ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತರೆ ವಿವಿಧ ವೈಯಕ್ತಿಕ ಕಾಮಗಾರಿಗೆ ಸಹಾಯಧನ ಸಿಗುತ್ತದೆ. ಅದೇ ರೀತಿ ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಶೆಡ್ ನಿರ್ಮಾಣಕ್ಕೂ ಸಹಾಯಧನ ಪಡೆಯಬಹುದಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ… E-Swathu Grama Pancgayat eKhata
ಜಾನುವಾರು ನಿರ್ಮಾಣಕ್ಕೆ ಸಹಾಯಧನ ಎಷ್ಟು?
ಹಸು, ಕುರಿ, ಕೋಳಿ, ಹಂದಿ ಶೆಡ್ ನಿರ್ಮಾಣಕ್ಕೆ ಒಂದೊAದು ರೀತಿಯ ಸಹಾಯಧನವಿದ್ದು; ಈ ಪೈಕಿ ಹಸು, ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲವರ್ಗದ ರೈತರಿಗೂ 57,000 ರೂಪಾಯಿ ನೀಡಲಾಗುತ್ತದೆ. ಈ ಮೊದಲು ಸಾಮಾನ್ಯ ವರ್ಗದ ರೈತರಿಗೆ 19,500 ಹಾಗೂ ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ 43,000 ರೂಪಾಯಿ ಸಹಾಯಧನ ಸಿಗುತ್ತಿತ್ತು.
ಈ ಮೊತ್ತದಲ್ಲಿ ಸುಮಾರು 10,556 ರೂಪಾಯಿ ಕೂಲಿಯಾಗಿ, ಉಳಿದ 46,644 ರೂಪಾಯಿ ಸಹಾಯಧನವಾಗಿ ಸಿಗುತ್ತದೆ. ಈ ಸಹಾಯಧನದ ಹಣವನ್ನು ಬಳಸಿಕೊಂಡು ಶೆಡ್ ನಿರ್ಮಾಣ ಮಾಡಿಕೊಳ್ಳಬಹುದು.
ಸಹಾಯಧನ ಪಡೆಯಲು ಏನು ಮಾಡಬೇಕು?
ದನದ ಕೊಟ್ಟಿಗೆ ಸಹಾಯಧನವೂ ಸೇರಿದಂತೆ ಒಟ್ಟಾರೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ನೆರವು ಪಡೆಯಲು ಬಹುಮುಖ್ಯವಾಗಿ ಜಾಬ್ ಕಾರ್ಡ್ (Job card) ಹೊಂದಿರಬೇಕು. ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಜಾಬ್‌ಕಾರ್ಡ್ ಪಡೆಯಬಹುದು.
ಜಾಬ್ ಕಾರ್ಡ್ ದೊರೆತ ನಂತರ ಜೀವಿತಾವಧಿಯಲ್ಲಿ ಒಟ್ಟು 5 ಲಕ್ಷ ರೂಪಾಯಿ ವರೆಗೆ ಸೌಲಭ್ಯ ಪಡೆಯಬಹುದು. ಈ ಪೈಕಿ ಕೊಟ್ಟಿಗೆ ನಿರ್ಮಾಣಕ್ಕೆ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಅರ್ಜಿ ಸಲ್ಲಿಸಿ 57,000 ರೂಪಾಯಿ ನೆರವು ನೆರವು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ…