Criminal case if govt employees dont return BPL card : ರಾಜ್ಯ ಸರ್ಕಾರ (Karnataka State Govt) ಅನರ್ಹರು ನಕಲಿ ದಾಖಲೆ ನೀಡಿ ಪಡೆದ ರೇಷನ್ ಕಾರ್ಡ್ ರದ್ದತಿ (Cancellation of Ration Card) ಕಾರ್ಯ ಚುರುಕುಗೊಳಿಸಿದೆ. ಇದೇ ಆಗಸ್ಟ್ 31ರೊಳಗೆ ಸರ್ಕಾರಿ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ್ (BPL Card) ಮರಳಿಸುವಂತೆ ಗಡುವು ನೀಡಲಾಗಿದೆ. ಈ ಗಡುವಿನೊಳಗೆ ಮರಳಿಸದಿದ್ದರೆ ದಂಡದ ಜೊತಗೆ ಕ್ರಿಮಿನಲ್ ಕೇಸ್ (Criminal case) ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ಅನರ್ಹರ ಮೇಲೆ ಕೇಂದ್ರ ಸರ್ಕಾರದ ನಿರ್ದೇಶನದಂತೆಯೇ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು, ಆದಾಯ ತೆರಿಗೆದಾರರು ಬಿಪಿಎಲ್ ಕಾರ್ಡ್ ಪಡೆಯಲು ಯೋಗ್ಯರಲ್ಲ. ಇಂಥವರು ಪಡೆದಿರುವ ಕಾರ್ಡ್ ಅನ್ನು ಖುದ್ದಾಗಿ ವಾಪಾಸು ಮಾಡದಿದ್ದರೆ ಶಿಕ್ಷೆ ನಿಶ್ಚಿತ ಎಂಬ ಮಾಹಿತಿ ನೀಡಲಾಗಿದೆಪಿ.
ಅನರ್ಹರಿಗೆ ಸರ್ಕಾರಿ ಸೌಲಭ್ಯ
ಸದ್ಯಕ್ಕೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್’ದಾರರಿಗೆ ‘ಅನ್ನಭಾಗ್ಯ’ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 5 ಕೆ.ಜಿ. ಆಹಾರ ಧಾನ್ಯ ಮತ್ತು ಉಳಿದ 5 ಕೆ.ಜಿ.ಗೆ 170 ರೂಪಾಯಿ ಹಣ ಪಾವತಿಸಲಾಗುತ್ತಿದೆ. ಜೊತೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ರೂಪಾಯಿ ನೆರವು ನೀಡಲಾಗುತ್ತಿದೆ.
ಇದರ ಜೊತೆಗೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್’ದಾರರಿಗೆ ಹಲವು ರೀತಿಯ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಅನರ್ಹರು ಕೂಡ ನಕಲಿ ದಾಖಲೆ ನೀಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ. ಇದರಿಂದ ಅನರ್ಹರರಿಗೆ ಸರ್ಕಾರಿ ಸೌಲಭ್ಯಗಳು ದುರ್ಬಳಕೆಯಾಗುತ್ತಿವೆ.
ಯಾವೆಲ್ಲ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ?
ಸರ್ಕಾರಿ ಹಾಗೂ ಅರೆ ಸರ್ಕರಿ ನೌಕರರು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾವಿರಾರು ನೌಕರರು ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದಿದ್ದಾರೆ. ಈಗಾಗಲೇ ಇಂತಹ ಬಹಳಷ್ಟು ನೌಕರರಿಂದ ಕಾರ್ಡ್ ವಾಪಾಸು ಪಡೆಯಲಾಗಿದೆ. ಜೊತೆಗೆ ಕೋಟ್ಯಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಅನಧಿಕೃತವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಸೆಸ್ಕ್ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಗುರುತಿಸಲಾಗಿದೆ. ಸರ್ಕಾರಿ ನೌಕರರೂ ಸೇರಿದಂತೆ ಒಟ್ಟಾರೆ ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರ ಹೆಸರನ್ನು ಆಯಾ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತಿದೆ.
ಸಿಕ್ಕಿ ಬಿದ್ದರೆ ಕ್ರಿಮಿನಲ್ ಕೇಸು
ಕರ್ನಾಟಕ ಪ್ರಿವೆನ್ಷನ್ ಆಫ್ ಅನ್‌ಆಥರೈಜಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ 1977ರ ಆದೇಶದಂತೆ ಅನರ್ಹರು ಕಾನೂನು ಬಾಹಿರವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಆಹಾರ ಇಲಾಖೆಯ ಎಚ್ಚರಿಕೆ, ಗಡುವು ಮೀರಿಯೂ ಅನರ್ಹ ಬಿಪಿಎಲ್ ಕಾರ್ಡ್ ಮರುಳಿಸದಿದ್ದರೆ ದಂಡದ ಜೊತೆಗೆ ಕ್ರಿಮಿನಲ್ ಕೇಸು ಕೂಡ ದಾಖಲಾಗಲಿದೆ.
ಪತ್ತೆಯಾದ ಅನರ್ಹರರು ಯಾವಾಗಿನಿದ ಬಿಪಿಎಲ್ ಕಾರ್ಡ್ ಬಳಸಿಕೊಂಡು ಆಹಾರ ಧಾನ್ಯ ಪಡೆದಿದ್ದಾರೋ ಆವಾಗಿನಿಂದ ಸದ್ಯದ ಮಾರುಕಟ್ಟೆ ದರದಂತೆ ಅಷ್ಟೂ ಆಹಾರಧಾನ್ಯದ ಹಣ ಪಡೆಯಲಾಗುವುದು. ಹಣ ವಸೂಲಿಯ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ.
ರಾಜ್ಯ ಆಹಾರ ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಇದೇ ಆಗಸ್ಟ್ 31 ರೊಳಗಾಗಿ ಸ್ಥಳೀಯ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆ ಅಥವಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಕಾರ್ಡ್ ವಾಪಾಸು ಮಾಡುವಂತೆ ಎಚ್ಚರಿಕೆ ನೀಡಲಾಗಿದೆ.
1 thought on “ಸರ್ಕಾರಿ ನೌಕರರು ರೇಷನ್ ಕಾರ್ಡ್ ಮರಳಿಸದಿದ್ದರೆ ಕ್ರಿಮಿನಲ್ ಕೇಸ್ | ಆಗಸ್ಟ್ 31ರ ಗಡುವು ನೀಡಿದ ಆಹಾರ ಇಲಾಖೆ Criminal case if govt employees dont return BPL card”