KVLDCL Karnataka Schemes 2024 : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದಿಂದ (Karnataka Veerashaiva Lingayat Development Corporation Limited) 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು; ವೀರಶೈವ-ಲಿಂಗಾಯತ ಜಾತಿ ಹಾಗೂ ಉಪಜಾತಿಗೆ ಸೇರಿದ ಸಮುದಾಯದ (ಪ್ರವರ್ಗ-3ಬಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ಸಾಲ ಯೋಜನೆಗಳು, ಜೀವಜಲ ನೀರಾವರಿ ಯೋಜನೆ, ಕಾಯಕ ಕಿರಣ ಯೋಜನೆ, ಭೋಜನಾಲಯ ಕೇಂದ್ರ (ಹೋಟೆಲ್ ಉದ್ಯಮ), ವಿಭೂತಿ ಘಟಕ ನಿರ್ಮಾಣ ಯೋಜನೆ, ಸ್ವಾವಲಂಭಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆಯಂತಹ ಹಲವು ಯೋಜನೆಗಳಡಿಯಲ್ಲಿ ಅರ್ಹರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಶೈಕ್ಷಣಿಕ ಸಾಲ ಯೋಜನೆಗಳು
ಬಸವ ಬೆಳಗು ಯೋಜನೆ (Fresh Students)
ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಅವರ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿ ಮಿತಿಯಲ್ಲಿರುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಾದ ಇಂಜಿನಿಯರಿAಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ ಕೋರ್ಸ್ ಅವಧಿಗೆ ಗರಿಷ್ಠ 4 ರಿಂದ 5 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಶೇ.2 ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು CET / NEET ಇತ್ಯಾದಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕಾರಿ ಕೋಟಾದ ಸೀಟು ಪಡೆದಿರಬೇಕು.
ಬಸವ ಬೆಳಗು ಯೋಜನೆ (Renewal)
2022-23ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 3ನೇ ಕಂತಿನ ನವೀಕರಣ ಸಾಲ ಹಾಗೂ 2023-24ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊAದಿಗೆ ಅರ್ಜಿ ಸಲ್ಲಿಸಬೇಕು.
ವಿದೇಶ ವಿದ್ಯಾವಿಕಾಸ ಯೋಜನೆ (Fresh Students)
ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳು QS World Ranking 500ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿಹೆಚ್ ಡಿ, ಮಾಸ್ಟರ್ ಡಿಗ್ರಿ ಕೋರ್ಸ್ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ 10 ಲಕ್ಷ ರೂಪಾಯಿಗಳಂತೆ 3 ವರ್ಷದ ಅವಧಿಗೆ ಒಟ್ಟು 20 ಲಕ್ಷ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ವಿದೇಶ ವಿದ್ಯಾವಿಕಾಸ ಯೋಜನೆ (Renewals)
2022-23 ಮತ್ತು 2023-24ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊAದಿಗೆ ಅರ್ಜಿ ಸಲ್ಲಿಸಬಹುದು.
ಜೀವಜಲ ನೀರಾವರಿ ಯೋಜನೆ
ವೀರಶೈವ-ಲಿಂಗಾಯತ ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದು. ಈ ಯೋಜನೆಯ ಪ್ರಯೋಜನ ಪಡೆಯಲು ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶದವರಿಗೆ ರೂ. 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. 1,20,000/- ಗಳ ಮಿತಿಯೊಳಗಿರಬೇಕು.
ಜೀವಜಲ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಪಡೆಯಲು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ರಾಜ್ಯದ ಇನ್ನುಳಿದ ಜಿಲ್ಲೆಯ ರೈತರಿಗೆ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? Personal Loans Schemes
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಘಟಕವೆಚ್ಚ 4.75 ಲಕ್ಷ ರೂಪಾಯಿಗಳಲ್ಲಿ 4.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ.
ಉಳಿದ ಜಿಲ್ಲೆಗಳಿಗೆ ಘಟಕವೆಚ್ಚ 3.75 ಲಕ್ಷ ರೂಪಾಯಿಗಳಲ್ಲಿ 3.25 ಲಕ್ಷ ರೂಪಾಯಿ ಸಹಾಯಧನ (ಸಬ್ಸಿಡಿ) ಸಿಗುತ್ತದೆ. ಈ ಮೊತ್ತದಲ್ಲಿ ಬೋರ್‌ವೆಲ್ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ 50,000 ರೂಪಾಯಿ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ.
ಕಾಯಕ ಕಿರಣ ಯೋಜನೆ
ವೀರಶೈವ ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗೆ ಅನುಸಾರ ಈ ಕೆಳಕಂಡAತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುತ್ತದೆ.
ಘಟಕ ವೆಚ್ಚ 1 ಲಕ್ಷ ರೂಪಾಯಿಗಳಿಗೆ ಶೇ.20ರಷ್ಟು ಗರಿಷ್ಟ 20,000 ರೂಪಾಯಿಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಟ 80,000 ರೂಪಾಯಿಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಘಟಕ ವೆಚ್ಚ 2 ಲಕ್ಷ ರೂಪಾಯಿಗಳಿಗೆ ಶೇ.15ರಷ್ಟು ಗರಿಷ್ಠ 30,000 ರೂಪಾಯಿಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.85ರಷ್ಟು ಗರಿಷ್ಟ 1,70,000 ರೂಪಾಯಿಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಭೋಜನಾಲಯ ಕೇಂದ್ರ (ಹೋಟೆಲ್ ಉದ್ಯಮ)
ವೀರಶೈವ ಲಿಳಗಾಯತ ಸಮುದಾಯದ ಜನರು ಹೋಟೆಲ್ (ಖಾನಾವಳಿ) ಉದ್ಯಮ ಕೈಗೊಳ್ಳಲು ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುವುದು. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ 5 ಲಕ್ಷ ರೂಪಾಯಿಗಾಗಿದೆ.
ಇದರಲ್ಲಿ 4,60,000 ರೂಪಾಯಿ ಸಾಲ ಮತ್ತು 40,000 ರೂಪಾಯಿ ಸಹಾಯಧನ ನೆರವು ನೀಡಲಾಗುವುದು. ಹೋಟೆಲ್ ಸ್ಥಾಪನೆ ಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20×30 ಅಡಿ ಅಳತೆಯ ನಿವೇಶನ ಹೊಂದಿರಬೇಕು.
ವಿಭೂತಿ ಘಟಕ ನಿರ್ಮಾಣ
ವೀರಶೈವ ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸಲು ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ. ಕುಟುಂಬದ ವಾರ್ಷಿಕ ವರಮಾನ 3.50 ಲಕ್ಷ ರೂಪಾಯಿಗಳನ್ನು ಹೊಂದಿದ ಮತ್ತು 18 ರಿಂದ 55 ವರ್ಷಗಳ ವಯೋಮಿತಿಯಲ್ಲಿ ಇರುವವರು ಅರ್ಜಿ ಸಲ್ಲಿಸಬಹುದು.
ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚ 4 ಲಕ್ಷ ರೂಪಾಯಿಗಳಾಗಿದ್ದು; ಇದರಲ್ಲಿ ವಾರ್ಷಿಕ ಶೇ.3ರ ಬಡ್ಡಿದರದಲ್ಲಿ 3,60,000 ರೂಪಾಯಿ ಸಾಲ ಮತ್ತು 40,000 ರೂಪಾಯಿ ಸಹಾಯಧನ ನೆರವು ನೀಡಲಾಗುವುದು.
ಸ್ವಾವಲಂಭಿ ಸಾರಥಿ ಯೋಜನೆ
ವಾಣಿಜ್ಯ ಬ್ಯಾಂಕುಗಳ ಸಹಯೋಗದ ಸ್ವಾವಲಂಭಿ ಸಾರಥಿ ಯೋಜನೆಯಡಿ ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಾಲ್ಕು ಚಕ್ರ ವಾಹನ (ಹಳದಿ ಬೋರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
ಸ್ವಯಂ ಉದ್ಯೋಗ ಸಾಲ ಯೋಜನೆ
ವಾಣಿಜ್ಯ ಬ್ಯಾಂಕುಗಳ ಸಹಯೋಗದ ಈ ಯೋಜನೆಯಡಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ / ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ. 20ರಷ್ಟು ಅಥವಾ ಗರಿಷ್ಟ 1 ಲಕ್ಷ ರೂಪಾಯಿಗಳ ಸಹಾಯಧನ ಮಂಜೂರು ಮಾಡಲಾಗುವುದು.
ಇದನ್ನೂ ಓದಿ: SBI ಬ್ಯಾಂಕ್ 1000+ ಹುದ್ದೆಗಳಿಗೆ ಅರ್ಜಿ ಆಹ್ವಾನ | ವಾರ್ಷಿಕ 66 ಲಕ್ಷ ರೂಪಾಯಿ ವರೆಗೂ ಸಂಬಳ SBI Bank SCO Recruitment 2024
ಅರ್ಜಿದಾರರು ಗಮನಿಸಬೇಕಾದ ಅಂಶಗಳು
ಈ ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು, ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಫಲಾನುಭವಿಗಳು ತಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು. ಈಗಾಗಲೇ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆಇದ್ದರೆ ಅಂಥವರು ಮತ್ತೆ ಅರ್ಜಿ ಸಲ್ಲಿಕೆಗೆ ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್‌ಸೈಟ್ https://kvldcl.karnataka.gov.inಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
ಮೇಲ್ಕಾಣಿಸಿದ ಎಲ್ಲ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಇದೇ 31-08-2024ರ ಒಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ರೀತಿಯ ಕೊನೆಯ ದಿನಾಂಕ ಇರುವುದಿಲ್ಲ.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲಾ ಕಚೇರಿಗಳ ಸಂಪರ್ಕ ಸಂಖ್ಯೆಗೆ ಇಲ್ಲಿ ಒತ್ತಿ…
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು Pradhan Mantri Awas Yojana 2024