8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 1000 ರೂಪಾಯಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ NMMS Scholarship scheme 2024

Spread the love

NMMS Scholarship scheme 2024 : ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 8ನೇ ತರಗತಿ ಓದುತ್ತಿರುವ ಪ್ರತಿಭಾವಂತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಪ್ರೇರೇಪಿಸಲು ಪ್ರತಿ ತಿಂಗಳು 1,000 ರೂ. ವಿದ್ಯಾರ್ಥಿವೇತನವನ್ನು ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ…

NMMS Application Form 2024-25 : National Means cum Merit Scholarship scheme
WhatsApp Group Join Now
Telegram Group Join Now

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಹಾಗೂ ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 9ನೇ ತರಗತಿಯಿಂದ ನಾಲ್ಕು ವರ್ಷಗಳ ಶಿಕ್ಷಣ ಮುಂದುವರೆಸಲು ಪ್ರತಿ ತಿಂಗಳು 1000 ರೂ. ವಿದ್ಯಾರ್ಥಿ ವೇತನ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಮುಂದುವರಿಸಲು 1,827 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ದೇಶಾದ್ಯಂತ ಒಟ್ಟು 1 ಲಕ್ಷ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದೆ. ಇದರಲ್ಲಿ ಕರ್ನಾಟಕ ರಾಜ್ಯದ 5,534 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗಲಿದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಯಾರು ಅರ್ಜಿ ಸಲ್ಲಿಸಬಹುದು? ಯಾರು ಅರ್ಜಿ ಸಲ್ಲಿಸಲು ಅರ್ಹರಿಲ್ಲ? ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಇತರೆ ಸಂಪೂರ್ಣ ವಿವರಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ… Vidyasiri Scholarship for Post Matric Students

ವಿದ್ಯಾರ್ಥಿ ವೇತನದ ವಿವರ

ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 1,000 ರೂಪಾಯಿಯಂತೆ ಪ್ರತಿ ವರ್ಷವೂ 12,000 ರೂಪಾಯಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ನಾಲ್ಕು ವರ್ಷಗಳ ಅವಧಿಗೆ ಅಂದರೆ 12ನೇ ತರಗತಿಯ ತನಕ ಒಟ್ಟು 48,000 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

9ನೇ ತರಗತಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ಬಳಿಕ, ವಿದ್ಯಾರ್ಥಿ ವೇತನವನ್ನು ಮುಂದುವರಿಸಲು 9, 10 ಹಾಗೂ 11ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಮೊದಲನೇ ಪ್ರಯತ್ನದಲ್ಲಿ ಪಾಸು ಮಾಡಬೇಕು. ಇದರ ಜೊತೆಗೆ ವಿದ್ಯಾರ್ಥಿಗಳು 9ನೇ ಹಾಗೂ 11ನೇ ತರಗತಿಯಲ್ಲಿ ಶೇ. 55 ಮತ್ತು SSಐಅ ಯಲ್ಲಿ ಶೇ. 60 ರಷ್ಟು ಅಂಕಗಳೊ೦ದಿಗೆ ಪಾಸಾಗಬೇಕು.

NMMS Scholarship scheme 2024

ಇದನ್ನೂ ಓದಿ: ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ ₹31 ಲಕ್ಷ ರೂಪಾಯಿ | ಎಲ್‌ಐಸಿ ಯಿಂದ ವಿಶೇಷ ಯೋಜನೆ LIC Kanyadan Policy

ಯಾರು ಅರ್ಜಿ ಸಲ್ಲಿಸಬಹುದು?

ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಪ್ರಸ್ತುತ 2024-25ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ವರಮಾನವು 3.5 ಲಕ್ಷ ರೂ. ಒಳಗಿರಬೇಕು ಮತ್ತು ವಿದ್ಯಾರ್ಥಿಗಳ 7ನೇ ತರಗತಿಯಲ್ಲಿ ಕನಿಷ್ಠ 55% ಅಂಕಗಳೊ೦ದಿಗೆ ಪಾಸಾಗಿರಬೇಕು.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಹಾಗೂ ಸರ್ಕಾರದ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಇದನ್ನೂ ಓದಿ: 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ನಿಮ್ಮ ಮೊಬೈಲ್’ನಲ್ಲಿಯೇ ಪಡೆಯಿರಿ Apply for Ayushman card in your mobile

ವಿದ್ಯಾರ್ಥಿವೇತನಕ್ಕಾಗಿ ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಡಿಸೆಂಬರ್ 8ನೇ ತಾರೀಕಿನಂದು ಎರಡು ಪತ್ರಿಕೆಗಳ ಸಾಮಾನ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 40ರಷ್ಟು ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 32 ರಷ್ಟು ಅಂಕಗಳೊ೦ದಿಗೆ ಪಾಸಾಗಬೇಕು.

ನಂತರದ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಮೀಸಲಾತಿ ಮತ್ತು ಅರ್ಹತಾ ನಿಯಮಗಳ ಅನುಸಾರವಾಗಿ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ Home loan complete information

ಅರ್ಜಿ ಹೇಗೆ ಸಲ್ಲಿಸಬೇಕು?

ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರನ್ನು ಭೇಟಿಯಾಗಿ ಅವರ ಮುಖಾಂತರವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-08-2024

ಸರ್ಕಾರದ ಸೂತ್ತೋಲೆ : Download
ಅರ್ಜಿ ಸಲ್ಲಿಸುವ ಲಿಂಕ್ : Apply Now

ಇದನ್ನೂ ಓದಿ: SSLC ಪಾಸಾದವರಿಗಾಗಿಯೇ ಇವೆ ರಾಜ್ಯ ಸರ್ಕಾರಿ ಈ ಹುದ್ದೆಗಳು : ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ… Karnataka State GOVT Jobs for SSLC Passed


Spread the love
WhatsApp Group Join Now
Telegram Group Join Now

Leave a Comment

error: Content is protected !!