ಆನ್‌ಲೈನ್ ಲೋನ್ ಪಡೆಯುವ ಮುನ್ನ ಈ ವಿಷಯ ತಿಳಿದಿರಿ Online Mobile App Loan

WhatsApp
Telegram
Facebook
Twitter
LinkedIn

Online Mobile App Loan : ಮೊಬೈಲ್ ಆ್ಯಪ್ ಲೋನ್ ದಂಧೆಗೆ ಅನೇಕ ಯುವಕ-ಯುವತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.  ತಿಂಗಳಲ್ಲಿ ಇಂತಹ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಮೊಬೈಲ್ ಆ್ಯಪ್‌ಗಳನ್ನು (Mobile App) ಬಳಸಿಕೊಂಡು ಸುಲಭವಾಗಿ ಸಾಲ (Loan) ನೀಡಿ ನಂತರ ಅವರಿಂದ ಡಬಲ್ ಹಣ ವಸೂಲಿ ಮಾಡುವ ಈ ಮೋಸದ ಜಾಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಮೊಬೈಲ್ ಬಳಕೆದಾರರು (Mobile users) ಈ ಬಗ್ಗೆ ಎಚ್ಚರದಿಂದಿರಬೇಕು.

ಮೋಸ ಹೋಗುವುದು ಹೇಗೆ?

ಕೆಲವೊಮ್ಮೆ ತುರ್ತಾಗಿ 4-5 ಸಾವಿರ ರೂಪಾಯಿ ಕೈಸಾಲ ಬೇಕಾಗುತ್ತದೆ. ಗೆಳೆಯರಲ್ಲಿ ಕೇಳಿದಾಗ ಸಿಗುವುದಿಲ್ಲ. ಸಂಬ೦ಧಿಕರಲ್ಲಿ ಕೇಳಲು ಮುಜುಗರವಾಗುತ್ತದೆ. ಒಂದು ವಾರದಲ್ಲಿ ಹಿಂದಿರುಗಿಸುವ ಇಷ್ಟು ಸಣ್ಣ ಪ್ರಮಾಣದ ಸಾಲ ಬ್ಯಾಂಕುಗಳಲ್ಲೂ ದೊರೆಯುವುದಿಲ್ಲ. ತಕ್ಷಣ ಸಾಲ ಬೇಕಾಗಿರುವುದರಿಂದ ಯಾರ ರಗಳೆಯೂ ಬೇಡವೆಂದು ಆ್ಯಪ್‌ಗಳ ಮೊರೆ ಹೋಗುತ್ತಾರೆ.

ಭಾರತದಲ್ಲಿ 600ಕ್ಕಿಂತ ಹೆಚ್ಚು ಲೋನ್ ಆ್ಯಪ್‌ಗಳಿವೆ (Loan App). ಇವುಗಳಿಗೆ RBI ಮಾನ್ಯತೆ ಇಲ್ಲ. ‘ಆನ್‌ಲೈನ್ ಲೋನ್’ (Online Loan) ಎಂದು ಪ್ಲೇ ಸ್ಟೋರ್‌ನಲ್ಲಿ ಹುಡುಕಿದರೆ ರಾಶಿಗಟ್ಟಲೇ ಆ್ಯಪ್‌ಗಳು ಕಾಣಿಸಿಕೊಳ್ಳುತ್ತವೆ. ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡುವಾಗ ನಿಮ್ಮ ಮೊಬೈಲ್ ನಂಬರ್, ಭಾವಚಿತ್ರ, ವಿಡಿಯೋ, ಆಧಾರ್ ಕಾರ್ಡ್, ಪಾನ್ ಕಾರ್ಡ್ (PAN Card), ಬ್ಯಾಂಕ್ ಪಾಸ್ ಬುಕ್, ಕೆಲಸ ಮಾಡುವಲ್ಲಿನ ಐಡೆಂಟಿಟಿ ಕಾರ್ಡ್ ಫೋಟೋ ಹೀಗೆ ನಿಮ್ಮಿಂದ ಹತ್ತಾರು ದಾಖಲಾತಿಗಳನ್ನು ಪಡೆದು, ಹಲವಾರು ನೀತಿ ನಿಯಮಗಳಿಗೆ ನಿಮ್ಮ ಒಪ್ಪಿಗೆ ಪಡೆದ ನಂತರ ಮೊಬೈಲ್‌ಗೆ ಇನ್ ಸ್ಟಾಲ್ ಆಗುತ್ತದೆ.

ಎಷ್ಟು ಮೊತ್ತದ ಸಾಲ ಸಿಗುತ್ತದೆ?

ತುರ್ತಾಗಿ ಕೈ ಸಾಲಗಳನ್ನು ಪಡೆಯುವ ಯುವಕರೇ ಈ ಆ್ಯಪ್’ಗಳ ಟಾರ್ಗೆಟ್. 3,000 ದಿಂದ 10,000 ರೂಪಾಯಿ ವರೆಗೆ ಸಾಲವನ್ನು ಈ ಆ್ಯಪ್‌ಗಳು ನೀಡುತ್ತವೆ. ಮೊದಲೇ ಎಲ್ಲ ದಾಖಲೆಗಳನ್ನು ನೀಡಿರುವ ಕಾರಣ ಸಾಲ ಪಡೆಯುವುದು ಸುಲಭ. ಪಡೆದ ಸಾಲಕ್ಕೆ ಆ ದಿನದಿಂದಲೇ ದಿನವಾರು ಲೆಕ್ಕದಲ್ಲಿ ಶೇ30ರಿಂದ 60ರಷ್ಟು ಬಡ್ಡಿಯನ್ನು (High Interest Loan) ವಿಧಿಸಿ ಗೊತ್ತುಪಡಿಸಿದ ದಿನದೊಳಗೆ ಸಾಲ ಚುಕ್ತಾ ಮಾಡಲು ಹೇಳುತ್ತಾರೆ.

ದಿನಗಳು, ತಿಂಗಳುಗಳ ಲೆಕ್ಕಾಚಾರದಲ್ಲಿ ಸಾಲ ನೀಡಲಾಗುತ್ತದೆ. ಸಣ್ಣ ಪ್ರಮಾಣದ ಸಾಲಗಳನ್ನು ಹೆಚ್ಚೆಂದರೆ ಒಂದು ತಿಂಗಳ ಅವಧಿಗೆ ನೀಡಲಾಗುತ್ತದೆ. ಬಡ್ಡಿ ಲೆಕ್ಕಾಚಾರದ ವಿಧಾನಗಳಲ್ಲಿ ಆ್ಯಪ್’ಗಳಿಂದ ಆ್ಯಪ್‌ಗಳಿಗೆ ವ್ಯತ್ಯಾಸವಿದೆ. ಶೇ.30ರಿಂದ ಶೇ.60ರಷ್ಟು ಬಡ್ಡಿಯನ್ನು ದಿನವಾರು ಲೆಕ್ಕಾಚಾರದಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ 5,000 ರೂಪಾಯಿ ಸಾಲ ಪಡೆದರೆ ಒಂದು ವಾರಕ್ಕೆ ರೂ.1500 ಬಡ್ಡಿ ಸೇರಿ ರೂ. 6500 ಅನ್ನು ಪಾವತಿಸಬೇಕಾಗುತ್ತದೆ.

ಹಣ ಪಾವತಿಸದಿದ್ದರೆ ಬ್ಲ್ಯಾಕ್‌ಮೇಲ್

ಸಾಲ ಪಡೆಯುವ ಆರಂಭದಲ್ಲಿ ಬಡ್ಡಿಯ ಸರಿಯಾದ ಲೆಕ್ಕಾಚಾರವನ್ನು ಆಪ್‌ಗಳು ನೀಡುವುದಿಲ್ಲ. ನಂತರ ಪಡೆದ ಸಾಲಕ್ಕೆ ವಿಧಿಸುವ ಬಡ್ಡಿ ಮೊತ್ತವು ಅಸಲಿನಷ್ಟೇ ಬೆಳೆದಿರುವುದರಿಂದ ಸಾಮಾನ್ಯವಾಗಿ ಅಷ್ಟು ಮೊತ್ತವನ್ನು ತಕ್ಷಣ ಪಾವತಿಸಲು ಸಾಲಗಾರರು ಸಿದ್ಧರಿರುವುದಿಲ್ಲ. ಒಂದೆರಡು ದಿನ ತಡವಾದರೂ ಅದು ಅವರಿಗೆ ಲಾಭವೇ. ಆ ದಿನಗಳಿಗೂ ಬಡ್ಡಿ ವಿಧಿಸುತ್ತಾರೆ.

ಸಾಲ ಹಿಂತಿರುಗಿಸದೆ ಇದ್ದಲ್ಲಿ ‘ಕ್ರೆಡಿಟ್ ರೇಟ್’ (Credit Rate) ಕಡಿಮೆಯಾಗುತ್ತದೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ನಿಮ್ಮ ಮೊಬೈಲ್‌ಗಳಿಂದ ಚಿತ್ರಗಳನ್ನು ಕದ್ದು ಆಶ್ಲೀಲ ಚಿತ್ರಗಳಾಗಿ ಮಾರ್ಫಿಂಗ್ ಮಾಡಿ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ಮುಂದುವರೆದು ಕೆಲವೊಮ್ಮೆ ನಕಲಿ ಎಫ್‌ಐಆರ್ ಪ್ರತಿಯನ್ನು ಕಳುಹಿಸುತ್ತಾರೆ. ಮುಂದೆ ನಿಮಗೆ ಯಾವ ಬ್ಯಾಂಕಿನಲ್ಲೂ ಸಾಲ ಸಿಗುವುದಿಲ್ಲ ಎಂದೂ ಹೆದರಿಸುತ್ತಾರೆ.

ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಅವರು ಹೆದರಿಸುವ ಪರಿ ಹೇಗಿರುತ್ತದೆಯೆಂದರೆ ಸಾಲ ಪಡೆದ ಶೇ.80ರಷ್ಟು ಮಂದಿ ಉಪಾಯವಿಲ್ಲದೆ ಅವರು ತಿಳಿಸುವಷ್ಟು ಮೊತ್ತವನ್ನು ಹಿಂದಿರುಗಿಸುತ್ತಾರ೦ತೆ. ಒಂದಷ್ಟು ಮಂದಿ ಅವರಿಗೆ ಹಣ ಪಾವತಿಸಲು ಕಷ್ಟವಾಗಿ ಆತ್ಮಹತ್ಯೆಯಂತಹ ಮೊರೆ ಹೋಗುತ್ತಾರೆ.

ನಿರಂತರ ಟಾರ್ಚರ್…

ಆನ್‌ಲೈನ್ ಸಾಲ ನೀಡುವ ಸಂಸ್ಥೆಗಳ ಟಾರ್ಚರ್ ಯಾವ ರೀತಿ ಇರುತ್ತದೆಯೆಂದರೆ ನೀವು ಒಮ್ಮೆ ಆನ್‌ಲೈನ್ ಸಾಲ ಪಡೆದರೆ ಮತ್ತೆ ಜೀವಮಾನದಲ್ಲಿ ಅಂತಹ ಸಾಲದ ಮೊರೆ ಹೋಗುವುದಿಲ್ಲ. ಆನ್‌ಲೈನ್ ಮೂಲಕ ಸಾಲ ಪಡೆದ ಯುವಕನೋರ್ವ ಹೇಳುವ ಪ್ರಕಾರ ಸಾಮಾನ್ಯವಾಗಿ ನಾಲ್ಕು ವಿಧದಲ್ಲಿ ಟಾರ್ಚರ್ ನೀಡುತ್ತಾರೆ. ಆನ್‌ಲೈನ್ ಸಾಲವನ್ನು ಪಡೆದ ಬಳಿಕ ನಿಗದಿತ ಕಂತಿನ೦ತೆ ಮೊತ್ತವನ್ನು ಪಾವತಿ ಮಾಡಬೇಕು.

ಒಂದು ವೇಳೆ ಪಾವತಿ ಮಾಡದಿದ್ದರೆ ಈ ಪಾರಂಭಿಕ ಹಂತದಲ್ಲಿ ಮೊಬೈಲ್ ಕರೆ ಮಾಡಿ ಸಾಲ ಕಟ್ಟಲು ಒತ್ತಡ ಹಾಕಲಾಗುತ್ತದೆ. ಎರಡನೇ ಹಂತದಲ್ಲಿ ಗೂಂಡಾಗಳಿ೦ದ ಕರೆ ಮಾಡಿ ಬೆದರಿಕೆ ಹಾಕಲಾಗುತ್ತದೆ. ಇದಾದ ಬಳಿಕವೂ ಕಟ್ಟದಿದ್ದಲ್ಲಿ ಮೂರನೆಯದಾಗಿ ಆ್ಯಪ್ ಮೂಲಕ ಸಾಲಗಾರನ ಹತ್ತಿರದ ಸಂಬ೦ಧಿ, ಗೆಳೆಯ/ಗೆಳೆಯತಿಯರಿಗೆ ಕರೆ, ಸಂದೇಶ ಕಳುಹಿಸಿ ಹಣ ಕಟ್ಟಲು ಒತ್ತಡ ಹಾಕುತ್ತಾರೆ.

ನಾಲ್ಕನೇ ಆಸ್ತ್ರವಾಗಿ ಸಾಲಗಾರನ ಫೋಟೋ ಮೇಲೆ ‘ವಂಚಕ’ ಎಂಬ ಸಂದೇಶ ಹಾಕಿ ಫೇಸ್‌ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡುತ್ತಾರೆ. ಇದಕ್ಕೆ ಹೆದರಿ ಈ ಹಂತಗಳಲ್ಲಿ ಸಾಕಷ್ಟು ಮಂದಿ ಆತ್ಮಹತ್ಯೆಯ ಮೊರೆ ಹೋಗುತ್ತಾರೆ.

ಯುವಕರೇ ಎಚ್ಚರ!

ತಿಂಗಳ ವೇತನ ಪಡೆಯುವ 25-45 ವರ್ಷದ ಯುವಕ/ ಯುವತಿಯರೇ ಇವರ ಟಾರ್ಗೆಟ್. ಆದ್ದರಿಂದ ಇಂತಹ ಆ್ಯಪ್‌ಗಳ ಬಗ್ಗೆ ಜಾಗರೂಕರಾಗಿರಿ. ಈ ಲೇಖನವನ್ನು ಓದಿ ತಮಾಷೆಗೆಂದೂ ಆ್ಯಪ್‌ಗಳನ್ನು ಡೌನ್‌ಲೋಡ್ (Download) ಮಾಡಿಕೊಳ್ಳುವ ಪ್ರಯತ್ನವನ್ನು ಮಾಡದಿರಿ.

ಯಾವುದೇ ಆ್ಯಪ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಸಾಲ ಪಡೆದು ಸಮಸ್ಯೆಯಲ್ಲಿ ಸಿಲುಕದಿರಿ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆ ಇಂತಹ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕುರಿತು ನಿಮಗೆ ಅರಿವಿರಲಿ.

Samagra Krushi   About Us
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon