PM Surya Ghar Scheme : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ’ಯಡಿ (PM Surya Ghar Muft Bijli Yojana) ನಿಮ್ಮ ಮನೆಗೆ ಸೋಲಾರ್ ವಿದ್ಯುತ್ (Rooftop) ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
15 ದಿನಗಳಲ್ಲೇ ಸಬ್ಸಿಡಿ ಸಂದಾಯ
ಈ ಹಿಂದೆ, ಅರ್ಜಿದಾರರು ಸೂರ್ಯ ಘರ್ ಯೋಜನೆಯಡಿ ನೋಂದಣಿಗಾಗಿ ಹಲವು ದಾಖಲೆಗಳೊಂದಿಗೆ ಡಿಸ್ಕಾಂ (DISCOM) ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ಆ ತಾಪತ್ರಯವಿಲ್ಲ. ಎಲ್ಲವನ್ನೂ ಡಿಜಿಟಲೀಕರಣಗೊಳಿಸಿದ್ದು; ಯೋಜನೆಯ ವೆಬ್‌ಸೈಟ್‌ನಲ್ಲಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸೂರ್ಯ ಘರ್ ಯೋಜನೆ ಪ್ರಾರಂಭವಾದ ಬಳಿಕ ಸೋಲಾರ್ ಘಟಕ ಸ್ಥಾಪನೆ ಪ್ರತೀ ತಿಂಗಳೂ ಹತ್ತು ಪಟ್ಟು ಹೆಚ್ಚಾಗುತ್ತಿದ್ದು; 2025ರ ಮಾರ್ಚ್ ವೇಳೆಗೆ 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆಗೆ ಗುರಿ ಹೊಂದಿದ್ದು, 2027ರ ವೇಳೆಗೆ ಒಂದು ಕೋಟಿ ಘಟಕಗಳ ಸ್ಥಾಪನೆ ಪೂರೈಸಲು ಮುಂದಾಗಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ವಿವರಣೆ ನೀಡಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಜ್ವಲ ಉಚಿತ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ… Pradhan Mantri Ujjwala Yojana
ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್
ಕಳೆದ 9 ತಿಂಗಳಲ್ಲಿ 6.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದ್ದು; ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅಸಾಧಾರಣ ಪ್ರಗತಿ ಸಾಧಿಸಿವೆ. ಈಗಾಗಲೇ 3,100 ಕೋಟಿ ರೂಪಾಯಿಗೂ ಹೆಚ್ಚು ಸಬ್ಸಿಡಿ ಹಣವನ್ನು ವಿತರಿಸಲಾಗಿದೆ. ಯೋಜನೆ ಅಳವಡಿಸಿಕೊಂಡ ಮನೆಗಳಿಗೆ 15 ದಿನಗಳಲ್ಲೇ ಸಬ್ಸಿಡಿ ಸಿಗುತ್ತಿರುವುದರಿಂದ ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಹರಿದು ಬರುತ್ತಿವೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ನಿಮ್ಮ ಮನೆಗೆ ಸೋಲಾರ್ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಲು ಸಹಾಯಧನ ಮತ್ತು ಸಾಲ ಸಹ ಸಿಗುತ್ತದೆ. ಇದರಿಂದ ಫಲಾನುಭವಿಗಳಿಗೆ ಯಾವುದೇ ರೀತಿಯ ವಿದ್ಯುತ್ ಬಿಲ್ ಬರುವುದಿಲ್ಲ. ಒಂದು ತಿಂಗಳಿಗೆ 300 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸಿಗುತ್ತದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಮಾರಾಟ ಕೂಡ ಮಾಡಬಹುದು.
ಸಬ್ಸಿಡಿ ಎಷ್ಟು ಸಿಗಲಿದೆ?
ಸೂರ್ಯ ಫರ್ ಯೋಜನೆಯಡಿ ತಮ್ಮ ಮನೆಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಸಹಾಯಧನ ನೀಡಲಿದ್ದು, ಸಬ್ಸಿಡಿ ವಿವರ ಈ ಕೆಳಗಿನಂತಿದೆ:
- 1 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 30,000 ರೂ.,
- 2 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 60,000 ರೂ.,
- 3 ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 78,000 ರೂ.,
ಸೂರ್ಯ ಘರ್ ಯೋಜನೆಯಡಿ ನೋಂದಣಿ ಹೇಗೆ?
ತಮ್ಮ ಮನೆಗೆ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಆಸಕ್ತಿ ಇರುವವರು ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜಿ’್ಲ ಯೋಜನೆ ವೆಬ್‌ಸೈಟ್’ನಲ್ಲಿ ನೇರವಾಗಿ ಮತ್ತು ಅಷ್ಟೇ ತ್ವರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲೇ ಹೇಳಿದಂತೆ https://www.pmsuryaghar.gov.in/ನಲ್ಲಿ ಈಗ ಐದೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್: Apply ಮಾಡಿ
ಇದನ್ನೂ ಓದಿ: ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ Bescom Solar Rooftop Scheme